Breaking News

ಬಂಟ್ವಾಳ: ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು – ಆರೋಪಿ ಬಂಧನ, ಆಭರಣ ವಶಕ್ಕೆ

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ತುಂಬೆ ಗ್ರಾಮದಲ್ಲಿ ಸಂಭವಿಸಿದ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಆರೋಪಿಯನ್ನು ಬಂಧಿಸಿ ಕಳವುಗೈದ ಚಿನ್ನದ ನೆಕ್ಲೇಸ್ ವಶಪಡಿಸಿಕೊಂಡಿದ್ದಾರೆ.

ತುಂಬೆ ಗ್ರಾಮದ ಹಾಮದ್ ಹಾಜಿ ರಸ್ತೆಯ ಪರ್ಲಬೈಲು ಎಂಬಲ್ಲಿನ ಅಬ್ದುಲ್ ಮಜೀದ್ ಎಂಬವರ ಮನೆಯಲ್ಲಿ ಮೇ 19ರಂದು ಯಾರು ಇಲ್ಲದ ಸಮಯ, ಕಳ್ಳರು ಮಹಡಿಯ ಹಂಚನ್ನು ಸರಿಸಿ ಮನೆಯೊಳಗೆ ಪ್ರವೇಶಿಸಿ, ಕಪಾಟಿನಲ್ಲಿ ಇಟ್ಟಿದ್ದ 28 ಗ್ರಾಂ ತೂಕದ 1,49,000 ರೂ. ಮೌಲ್ಯದ ಚಿನ್ನದ ನೆಕ್ಲೇಸ್ ಕಳವು ಮಾಡಿದ್ದರು.

ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ. 51/2025, ಕಲಂ 331(1), 305 ಬಿ.ಎನ್‌.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆಯ ಕುರಿತು ತನಿಖೆ ನಡೆಸಿದ ಪೊಲೀಸರು, ಮೇ 20ರಂದು ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ ತುಂಬೆ ಗ್ರಾಮದ ಪರ್ಲಬೈಲು ಮನೆ ನಿವಾಸಿ ಹಸನ್ ಬಾವ (50) ಎಂಬಾತನನ್ನು ಬಂಧಿಸಿ, ಕಳವುಗೈದ ಚಿನ್ನದ ನೆಕ್ಲೇಸ್ ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರ, ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ‌ ಗ್ರಾಮಾಂತರ ಪೊಲೀಸ್‌ ಠಾಣಾ ಪೊಲೀಸ್ ನಿರೀಕ್ಷಕ ಶಿವಕುಮಾರ್ ಬಿ ನೇತೃತ್ವದಲ್ಲಿ ಪಿಎಸ್‌ಐಗಾಳದ ಮಂಜುನಾಥ ಟಿ, ಖೀರಪ್ಪ ಘಟಕಾಂಬಳೆ, ಎಎಸ್‌ಐಗಾಳದ ಗಿರೀಶ್, ಬಾಲಕೃಷ್ಣ, ಹೆಡ್‌ಕಾನ್ ಸ್ಟೇಬಲ್‌ ನಝೀರ್, ಹರಿಶ್ಚಂದ್ರ, ಲೋಕೇಶ್, ಕೃಷ್ಣ ನಾಯ್ಕ ಹಾಗೂ ಪಿಸಿ ಸಹದೇವ ಸೇರಿದಂತೆ ಪೊಲೀಸ್ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಭೇದಿಸಿದೆ.

Follow us on Social media

About the author