ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್ ಡಿ.ಸಿಯಲ್ಲಿನ ಕ್ಯಾಪಿಟಲ್ ಜ್ಯೂವಿಶ್ ಮ್ಯೂಸಿಯಮ್ ಸಮೀಪದ ಇಸ್ರೇಲ್ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಗಳನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಬುಧವಾರ (ಮೇ 21) ಸಂಜೆ ನಡೆದಿರುವುದಾಗಿ ವರದಿ ತಿಳಿಸಿದೆ.
ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ನೀಡಿರುವ ಮಾಹಿತಿ ಪ್ರಕಾರ, ಈ ದಾಳಿ ಎಫ್ ಬಿಐನ ವಾಷಿಂಗ್ಟನ್ ಫೀಲ್ಡ್ ಕಚೇರಿ ಸಮೀಪವೇ ನಡೆದಿದ್ದು, ಇದು ಕಳವಳಕ್ಕೆ ಎಡೆಮಾಡಿಕೊಟ್ಟಿರುವುದಾಗಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹೆಚ್ಚು ವಿವರ ಬಹಿರಂಗಪಡಿಸಿಲ್ಲ. ಆದರೆ ಮ್ಯೂಸಿಯಮ್ ಆವರಣದ ಹೊರಭಾಗದಲ್ಲಿ ಗುಂಡಿನ ದಾಳಿ ನಡೆದಿರುವುದಾಗಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ದಾಳಿಗೆ ಸಂಬಂಧಿಸಿದಂತೆ ಯಾವುದೇ ವಿವರ ತಕ್ಷಣಕ್ಕೆ ಬಹಿರಂಗಪಡಿಸಲ್ಲ, ಗುರುವಾರ(ಮೇ 22) ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುವುದಾಗಿ ವರದಿ ವಿವರಿಸಿದೆ.
ಕ್ರಿಮಿನಲ್ ಕೃತ್ಯ ಎಸಗಿದವರ ವಿರುದ್ಧ ಅಮೆರಿಕದ ಅಧಿಕಾರಿಗಳು ಕಠಿನ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸ ಇದ್ದಿರುವುದಾಗಿ ವಿಶ್ವಸಂಸ್ಥೆಯಲ್ಲಿರುವ ಇಸ್ರೇಲ್ ರಾಯಭಾರಿ ಡಾನೈ ಡಾನೊನ್ ತಿಳಿಸಿದ್ದಾರೆ.
Follow us on Social media