ಉಡುಪಿ ಜಿಲ್ಲೆಯ ಪ್ರಮುಖ ಶೈಕ್ಷಣಿಕ ಮತ್ತು ಆರೋಗ್ಯದ ಹಬ್ ಆಗಿರುವ ಮಣಿಪಾಲದಲ್ಲಿ ಮಳೆಯಿಂದಾಗಿ ಉಡುಪಿ-ಮಣಿಪಾಲ ರಸ್ತೆಯುದ್ದಕ್ಕೂ ಕೃತಕ ಪ್ರವಾಹ ನಿರ್ಮಾಣವಾಗಿದ್ದು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದ್ದಾರೆ.
ಮಣಿಪಾಲದ ಐನಾಕ್ಸ್ ಬಳಿಯ ರಸ್ತೆ ಸಂಪೂರ್ಣವಾಗಿ ಮುಳುಗಿ, ನದಿಯಂತೆ ನೀರು ಹರಿದಿದ್ದು, ನೀರಿನ ಜೊತೆಗೆ ಕಲ್ಲು ಮಣ್ಣುಗಳು ರಸ್ತೆ ಮೇಲೆ ಹರಿದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ.
ಮಣಿಪಾಲ, ಪರ್ಕಳ ಭಾಗದಲ್ಲಿ ವಿಪರೀತ ಮಳೆಯಾದ ಕಾರಣ ಬೆಟ್ಟದ ಮೇಲಿಂದ ಹರಿದ ಭಾರೀ ಪ್ರಮಾಣದ ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದೆ. ಮಣಿಪಾಲ- ಲಕ್ಷ್ಮೀಂದ್ರ ನಗರ ಇಳಿಜಾರು ಪ್ರದೇಶವು ಕೆಸರು ನೀರಿನಿಂದ ಜಲಾವೃತವಾಗಿದೆ. ಉಡುಪಿ ಮಣಿಪಾಲ ರಸ್ತೆಯಲ್ಲಿ ಪೊಲೀಸರು ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದು, ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
Follow us on Social media