ಮಂಗಳೂರು: ವರ್ಕ್ ಫ್ರಮ್ ಹೋಮ್ ಆನ್ಲೈನ್ ಕೆಲಸದ ಜಾಹೀರಾತನ್ನು ನಂಬಿ ವ್ಯಕ್ತಿಯೊಬ್ಬ 6.50 ಲಕ್ಷ ರೂ. ಕಳೆದುಕೊಂಡಿರುವ ಕುರಿತಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ಇನ್ಸ್ಟಾಗ್ರಾಂನಲ್ಲಿ ಆನ್ಲೈನ್ ಕೆಲಸದ ಜಾಹೀರಾತೊಂದರ ಲಿಂಕ್ ಕ್ಲಿಕ್ ಮಾಡಿದಾಗ ಅದು ವಾಟ್ಸ್ಆ್ಯಪ್ ಹೋಗಿದೆ. ಅದರಲ್ಲಿ ಅಪರಿಚಿತ ಸಂಖ್ಯೆಯಿಂದ ಲಿಂಕ್ ಒಂದು ಬಂದಿದ್ದು. ಲಿಂಕ್ ಒತ್ತಿ ನೋಂದಣಿ ಮಾಡುವಂತೆ ಅಪರಿಚಿತ ವ್ಯಕ್ತಿ ತಿಳಿಸಿದಂತೆ ದೂರುದಾರು ಲಿಂಕ್ ತೆರೆದರು. ಬಳಿಕ ಟೆಲಿಗ್ರಾಂ ಆ್ಯಪ್ ಡೌನ್ಲೋಡ್ ಮಾಡಿ ಅಖೀಲ್ ಎಂಬಾತನನ್ನು ಫಾಲೋ ಮಾಡುವಂತೆ ಅಪರಿಚಿತ ವ್ಯಕ್ತಿ ತಿಳಿಸಿದನು. ಅದರಂತೆ ಅಖೀಲ್ 5 ಟಾಸ್ಕ್ಗಳನ್ನು ನೀಡಿದ್ದು, ಮೊದಲಿಗೆ 500 ರೂ. ಟ್ರಾನ್ಸ್ಫರ್ ಮಾಡಿದ್ದಕ್ಕೆ ಲಾಭಾಂಶ ಸಹಿತ 2,000 ರೂ. ವಾಪಸು ನೀಡಿದರು. ಇದನ್ನು ನಂಬಿ ದೂರುದಾರರು ಹಂತ ಹಂತವಾಗಿ ಒಟ್ಟು 6.50 ಲಕ್ಷ ರೂ. ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಆದರೆ ಆ ಬಳಿಕ ಅಪರಿಚಿತ ವ್ಯಕ್ತಿಗಳು ವಿವಿಧ ಕಾರಣ ನೀಡಿ ಲಾಭಾಂಶ, ಹೂಡಿಕೆ ಮಾಡಿದ ಹಣ ವಾಪಸು ನೀಡಿಲ್ಲ. ಆಗ ದೂರುದಾರರಿಗೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.
Follow us on Social media