Breaking News

ಕಾರವಾರಕ್ಕೆ ಸರಕು ಹಡಗಿನಲ್ಲಿ ಆಗಮಿಸಿದ್ದ ಪಾಕ್‌ ಪ್ರಜೆ ವಾಪಸ್‌

ಕಾರವಾರ: ಸರಕು ಹಡಗಿನಲ್ಲಿ ಕಾರವಾರಕ್ಕೆ ಆಗಮಿಸಿದ್ದ ಪಾಕ್‌ ಪ್ರಜೆಯನ್ನು ಶಿಪ್‌ ಸಮೇತ ವಾಪಸ್‌ ಕಳುಹಿಸಲಾಗಿದೆ.

ಭಾರತ-ಪಾಕಿಸ್ತಾನದ ಯುದ್ಧ ಬಿಕ್ಕಟ್ಟಿನ ನಡುವೆಯೇ ನಿರ್ಬಂಧವಿದ್ದರೂ ಪಾಕಿಸ್ತಾನದ ಪ್ರಜೆಗಳು ಭಾರತಕ್ಕೆ ಬರುತ್ತಿದ್ದು, ಇರಾಕ್ ಮೂಲದ ಹಡಗಿನ ಮೂಲಕ ಬಂದ ಪಾಕಿಸ್ತಾನದ ಪ್ರಜೆಯನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಂದರಿನಲ್ಲಿ ಬಂಧಿಸಿ ತನಿಖೆ ನಂತರ ಬುಧವಾರ ಶಿಪ್ ಸಮೇತ ಭಾರತದ ಗಡಿಯಿಂದ ಕಳುಹಿಸಲಾಗಿದೆ.

ಇರಾಕ್‌ನ ಅಲ್ ಜುಬೇರ್‌ನಿಂದ ಕಾರವಾರ ಬಂದರಿಗೆ ಬಂದಿದ್ದ ಸರಕು ಸಾಗಾಣಿಕೆ ಹಡಗಿನಲ್ಲಿ ಪಾಕಿಸ್ತಾನದ ಓರ್ವ, ಭಾರತ ಮೂಲದ 15, ಸಿರಿಯಾ -2 ಪ್ರಜೆಗಳು ಶಿಪ್‌ನಲ್ಲಿ ಇದ್ದರು. ಕಾರವಾರ ಬಂದರಿಗೆ ಆಗಮಿಸಿತ್ತು. ಈ ವೇಳೆ ಮಾಹಿತಿ ಪಡೆದ ಬಂದರು ಇಲಾಖೆ, ಕರಾವಳಿ ಕಾವಲುಪಡೆಗೆ ಮಾಹಿತಿ ನೀಡಿದ್ದು ಶಿಪ್‌ನಲ್ಲಿ ಇದ್ದ ಪಾಕಿಸ್ತಾನಿ ಪ್ರಜೆಯಿಂದ ಮೊಬೈಲ್ ಇತರೆ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿತ್ತು.

ನಿಬಂಧನೆ ಮೂಲಕ ಶಿಪ್‌ ಸಮೇತ ಇಂದು ಗಡಿ ದಾಟಿಸಲಾಗಿದ್ದು, ಪಹಲ್ಗಾಮ್‌ ದಾಳಿಯ ನಂತರ ಭಾರತದ ಬಂದರುಗಳಿಗೆ ಪಾಕಿಸ್ತಾನ ಹಾಗೂ ಚೀನಾದ ಹಡಗುಗಳಿಗೆ ನಿರ್ಬಂಧ ವಿಧಿಸಲಾಗಿದೆ.

Follow us on Social media

About the author