Breaking News

ಪಡುಬಿದ್ರಿ: ನಾಯಿ ಅಡ್ಡ ಬಂದು ಬೈಕ್‌ ಪಲ್ಟಿ: ಬಾಲಕ ಸಾವು

ಪಡುಬಿದ್ರಿ: ನಾಯಿ ಅಡ್ಡ ಬಂದ ಪರಿಣಾಮ ಬೈಕ್‌ ಹೆದ್ದಾರಿ ಬದಿಯ ಮೈಲು ಕಲ್ಲಿಗೆ ಡಿಕ್ಕಿಯಾಗಿ ತೆಂಕ ಎರ್ಮಾಳು ನಿವಾಸಿ ಅಬ್ದುಲ್‌ ಅಜೀಜ್‌ ಅವರ ಪುತ್ರ ಶೇಖ್‌ ಅಬ್ದುಲ್‌ ಸೈಫಾನ್‌ (14) ಮೃತಪಟ್ಟಿದ್ದಾರೆ.

ತಂದೆಯು ತಮ್ಮ ಬೈಕಿನಲ್ಲಿ ಮಗನೊಂದಿಗೆ ಪಡುಬಿದ್ರಿಗೆ ಹೋಗಿ ಆತನಿಗೆ ಪುಸ್ತಕಗಳನ್ನು ಖರೀದಿಸಿ ಮನೆಗೆ ವಾಪಸಾಗುತ್ತಿದ್ದಾಗ ಅವಘಡ ಸಂಭವಿಸಿತು. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನ ಅರ್ಧಭಾಗ ಸುಟ್ಟು ಹೋಗಿದೆ. ರಸ್ತೆಗೆ ಬಿದ್ದು ತೀವ್ರ ಗಾಯಗೊಂಡ ಸೈಫಾನ್‌ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಮೃತಪಟ್ಟರು. ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow us on Social media

About the author