ಉಪ್ಪಿನಂಗಡಿ: ನೆಲ್ಯಾಡಿ ಗ್ರಾಮದ ಮಾದೇರಿ ಎಂಬಲ್ಲಿ ಶರತ್ ಕುಮಾರ್ (34) ನನ್ನು ಶುಕ್ರವಾರ ರಾತ್ರಿ ಮರದ ದೊಣ್ಣೆಯಿಂದ ಹೊಡೆದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ ಹರಿಪ್ರಸಾದ್‌ನನ್ನು ಉಪ್ಪಿನಂಗಡಿ ಪೊಲೀಸರು ರವಿವಾರ ಬಂಧಿಸಿದ್ದಾರೆ.
ತನ್ನ ಚಿಕ್ಕಪ್ಪನ ಮನೆಯವರೊಡಗೂಡಿ ಸಂಗ್ರಹಿಸಿದ್ದ ಕಟ್ಟಿಗೆಯನ್ನು ತುಂಡರಿಸಿದ ವಿಚಾರಕ್ಕೆ ಸಂಬಂಧಿಸಿ ಚಿಕ್ಕಪ್ಪನ ಮನೆ ಮಂದಿ ಜತೆ ಸಂಘರ್ಷ ನಿರತನಾದ ಆತನನ್ನು ಹೊಡೆದು ಕೊಲ್ಲಲಾಗಿತ್ತು.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಹರಿಪ್ರಸಾದ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Follow us on Social media