ಮಲ್ಪೆ: ಕೊಡವೂರು ಗ್ರಾಮ ಕಲ್ಮಾಡಿ ಬಳಿಯ ಮನೆಯಲ್ಲಿ ಮೇ 8ರಂದು ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ಅನುಮತಿ ಇಲ್ಲದೆ ತಡರಾತ್ರಿಯವರೆಗೆ ಕರ್ಕಶವಾದ ಡಿಜೆ ಸೌಂಡ್ಸ್ ಹಾಕಿ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡಿದವರ ಮೇಲೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರು ಬಂದ ಹಿನ್ನೆಲೆಯಲ್ಲಿ ಮೇ 8ರಂದು ಪೊಲೀಸರು ರಾತ್ರಿ 1 ಗಂಟೆಯ ವೇಳೆಗೆ ಕಲ್ಮಾಡಿಯಲ್ಲಿ ರಂಜಿತ್ ಅವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದು, ತಡರಾತ್ರಿಯವರೆಗೆ ಡಿಜೆ ಸೌಂಡ್ ಬಳಸಿರುವುದು ಕಂಡು ಬಂದಿದ್ದು, ರಂಜಿತ್ ಹಾಗೂ ಸುಶಾಂತ್ ಸೌಂಡ್ ಸಿಸ್ಟಮ್ ಮಾಲಕ ಶಶಿಧರ ವಿರುದ್ಧ ಪ್ರಕರಣ ದಾಖಲಾಗಿದೆ.
Follow us on Social media