ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳು ಕೃತ್ಯ ಎಸಗಿ ಕಾರಿನಲ್ಲಿ ಪರಾರಿಯಾಗುತ್ತಿದ್ದಾಗ ಸ್ಥಳದಲ್ಲಿದ್ದ ಇಬ್ಬರು ಬುರ್ಖಾ ಧರಿಸಿದ ಮಹಿಳೆಯರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಈ ಮಹಿಳೆಯರು ಘಟನೆಯಲ್ಲಿ ನೇರವಾಗಿ ಭಾಗಿಯಿಲ್ಲ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಅವರನ್ನು ಪ್ರಕರಣದ ಎರಡನೇ ಆರೋಪಿ ನಿಯಾಜ್‌ನ ಚಿಕ್ಕಮ್ಮ ಮತ್ತು ಸೋದರ ಸಂಬಂಧಿ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಈ ಮಹಿಳೆಯರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸಂಬಂಧಿಯೊಬ್ಬರನ್ನು ಭೇಟಿ ಮಾಡಲು ಬಜ್ಪೆಯ ಫ್ಲಾಟ್‌ಗೆ ಬಂದಿದ್ದರು. ಮನೆಗೆ ಹಿಂತಿರುಗುವಾಗ, ಅವರು ಘಟನಾ ಸ್ಥಳದ ಸಮೀಪದ ಹೋಟೆಲ್‌ನಿಂದ ಊಟದ ಪಾರ್ಸೆಲ್ ಅನ್ನು ತೆಗೆದುಕೊಂಡಿದ್ದಾರೆ. ಆಗ ಅವರು ನಿಯಾಜ್ ರಸ್ತೆಯಲ್ಲಿ ಓಡುತ್ತಿರುವುದನ್ನು ಗಮನಿಸಿದ್ದಾರೆ. ಸ್ಥಳದಲ್ಲಿ ಅಪಘಾತವಾದಂತೆ ಕಂಡುಬಂದ ಕಾರಣ ನಿಯಾಜ್‌ನನ್ನು ಸಂಪರ್ಕಿಸಿದ್ದಾಗಿ ವಿಚಾರಣೆ ವೇಳೆ ಮಹಿಳೆಯರು ಪೊಲೀಸರಿಗೆ ತಿಳಿಸಿದ್ದಾರೆ.
Follow us on Social media