ಮಂಗಳೂರು: ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವ ರೀತಿ ಕೆಲವು ವ್ಯಕ್ತಿಗಳು, ಗುಂಪುಗಳು ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಹಾಕಿದ್ದು, ಅದರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿವಾಹಿನಿಯೊಂದರ ಯುಟ್ಯೂಬ್ ಲೈವ್‌ನಲ್ಲಿ “ಕುಡ್ಲ ಫ್ರೆಂಡ್ಸ್’ ಎಂಬ ಹೆಸರಿನ ಯುಟ್ಯೂಬ್ ಬಳಕೆದಾರ ಮತ್ತು ಇನ್‌ಸ್ಟಾಗ್ರಾಂನ “ಬ್ಯಾರಿ ರೋಯಲ್ ನವಾಬ್’ ಎಂಬ ಖಾತೆ ವಿರುದ್ಧ ಪ್ರಕರಣ ದಾಖಲಾಗಿದೆ.
ಸುಹಾಸ್ ಬಲಿದಾನ ವ್ಯರ್ಥವಾಗಲು ಬಿಡೆವು ಎಂದು ಪೋಸ್ಟ್ ಮಾಡಿದ ಖಾತೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ.
“ವಿಎಚ್‌ಪಿ ಬಜರಂಗದಳ ಅಶೋಕ ನಗರ’ ಮತ್ತು “ಶಂಖನಾದ ಇನ್‌ಸ್ಟಾಗ್ರಾಂ’ ಖಾತೆ, ಸುದ್ದಿವಾಹಿನಿಯ ನ್ಯೂಸ್ ಲೈವ್‌ನಲ್ಲಿ “ಮಿ| ಸೈಲೆಂಟ್ ಲವರ್’ ಎನ್ನುವ ವ್ಯಕ್ತಿ, “ಬ್ಯಾರಿ ಮುಸ್ಲಿಂ ಸಮ್ರಾಜ್ಯ 3.0′ ಇನ್‌ಸ್ಟಾಗ್ರಾಂ, “ಹಿಂದೂ ಮಂತ್ರ’ ಇನ್‌ಸ್ಟಾಗ್ರಾಂ ಪೇಜ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
“ಉಳ್ಳಾಲೊ¤ ಮಕ್ಕ’ ಎನ್ನುವ ಇನ್‌ಸ್ಟಾಗ್ರಾಂ ಪೇಜ್, “ಹಿಂದೂ ಧರ್ಮ 006′ ಮತ್ತು “ಕರಾವಳಿ ಅಫೀಶಿಯಲ್’ ಎನ್ನುವ ಇನ್ಸ್‌ಸ್ಟಾಗ್ರಾಂ ಖಾತೆ, “ಡಿಜೆ ಭರತ್ 2008′ ಇನ್‌ಸ್ಟಾಗ್ರಾಂ ಖಾತೆ, ಸುದ್ದಿವಾಹಿನಿಯ ಯೂಟ್ಯೂಬ್ ಲೈವ್‌ನಲ್ಲಿ ಕಮೆಂಟ್ ಹಾಕಿದ ಅಬ್ದುಲ್ ಮುನೀರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. “ಟ್ರೋಲ್ ಮಯಾದಿಯಾಕ’, “ಮೈಕಲ ಟ್ರೋಲ್ 05′ ಇನ್‌ಸ್ಟಾಗ್ರಾಂ ಖಾತೆಯ ವಿರುದ್ಧ ಕೂಡ ಪ್ರಕರಣ ದಾಖಲಾಗಿದೆ.
Follow us on Social media