Breaking News

ಕಾರ್ಕಳ: ಮೀನು ಸಾಗಾಟ ಲಾರಿಗೆ ಕಲ್ಲು

ಕಾರ್ಕಳ: ಮಲ್ಪೆ ಬಂದರಿನಿಂದ ತಮಿಳುನಾಡಿಗೆ ಮೀನು ತುಂಬಿಕೊಂಡು ಬರುತ್ತಿದ್ದ ಲಾರಿಗೆ ದುಷ್ಕರ್ಮಿಗಳು ಕಲ್ಲು ತೂರಿದ ಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಕೇಮಾರು ಪರ್ಪಲೆಯಲ್ಲಿ ನಡೆದಿದೆ.

ತಮಿಳುನಾಡು ಮೂಲದ ಎಂ. ಮಣಿಕಂಠನ್‌ (34) ಅವರು ಲಾರಿಯಲ್ಲಿ ಮಲ್ಪೆಯಿಂದ ಮೀನು ತುಂಬಿಕೊಂಡು ಹೊರಟಿದ್ದರು. ಕೇಮಾರು ಪರ್ಪಲೆ ಬಳಿ ಬರುತ್ತಿದ್ದಾಗ ಕಾರ್ಕಳ ಕಡೆಯಿಂದ ಎರಡು ಬೈಕ್‌ಗಳಲ್ಲಿ ಬಂದ ಮೂವರು ಮುಸುಕುಧಾರಿಗಳು ಲಾರಿಯ ಮುಂಭಾಗದ ಗಾಜಿಗೆ ಕಲ್ಲು ಎಸೆದಿದ್ದಾರೆ.

ಲಾರಿಯ ಗಾಜು ಹಾನಿಗೀಡಾಗಿದ್ದು, 15,000 ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Follow us on Social media

About the author