ಶಿರ್ವ: ಪೊಲೀಸ್ ಠಾಣಾ ವ್ಯಾಪ್ತಿಯ ಬಂಟಕಲ್ಲು ಬಸ್ಸು ನಿಲ್ದಾಣದ ಬಳಿ ಮಾದಕವಸ್ತು ಗಾಂಜಾವನ್ನು ಸಿಗರೇಟ್‌ನಲ್ಲಿ ಸೇರಿಸಿ ಸೇದುತ್ತಿದ್ದ ಶಿವಪ್ರಸಾದ್ (30) ಮತ್ತು ಆಲ್ವಿನ್ ಶರೂನ್ ಡಿ’ಅಲ್ಮೇಡ (29) ರನ್ನು ಶಿರ್ವ ಪೊಲೀಸ್ ಠಾಣಾಧಿಕಾರಿ ಮಂಜುನಾಥ ಅವರು ಎ.27ರಂದು ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ.
ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕವಸ್ತು ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ.
ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media