ಗಾಯಕಿ ಪೃಥ್ವಿ ಭಟ್ ಅವರ ಪ್ರೇಮವಿವಾಹ ಇದೀಗ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಪೋಷಕರನ್ನು ಧಿಕ್ಕರಿಸಿ ಮದುವೆಯಾದ ಬಗ್ಗೆ ತಂದೆ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಇದೀಗ ತಂದೆ ಆರೋಪಕ್ಕೆಲ್ಲಾ ಪೃಥ್ವಿ ಭಟ್ ಸ್ಪಷ್ಟನೆ ನೀಡಿದ್ದಾರೆ. ಮದುವೆ ವಿಚಾರದಲ್ಲಿ ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದಿದ್ದಾರೆ.
ಕಳೆದ ಎರಡು ದಿನದಿಂದ ಹವ್ಯಕ ಸಮುದಾಯದ ವಾಟ್ಸಪ್ ಗ್ರೂಪಿನಲ್ಲಿ ಮತ್ತೆ ಬೇರೆ ಬೇರೆ ಗ್ರೂಪ್‌ನಲ್ಲಿ ಮಗಳ ಮದುವೆ ಹಾಗೂ ನರಹರಿ ದೀಕ್ಷಿತ್ ಬಗ್ಗೆ ಆರೋಪಿಸಿ ಪೃಥ್ವಿ ತಂದೆ ಆಡಿಯೋವೊಂದನ್ನು ಹಂಚಿಕೊಂಡಿಕೊಂಡಿದ್ದರು. ಇದಕ್ಕೆ ಗಾಯಕಿ ಪ್ರತಿಕ್ರಿಯಿಸಿ, ನನ್ನ ಮದುವೆ ವಿಚಾರದಲ್ಲಿ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಅವರ ಯಾವುದೇ ಕೈವಾಡವಿಲ್ಲ. ಮದುವೆ ಆಗುವ ದಿನ ನರಹರಿ ದೀಕ್ಷಿತ್ ಅವರಿಗೆ ವಿಷಯ ತಿಳಿಸಿ, ಅವರಿಂದ ಆಶೀರ್ವಾದ ಪಡೆದೆವು. ಇದರಲ್ಲಿ ಅವರ ತಪ್ಪೇನು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮದುವೆ ವಿಚಾರದಲ್ಲಿ ನನ್ನಿಂದ ತಪ್ಪಾಗಿದೆ ಕ್ಷಮಿಸಿ ಅಂತ ಆಡಿಯೋ ಮೂಲಕ ಮನವಿ ಮಾಡಿದ್ದಾರೆ.
ಮಾರ್ಚ್ 7ರಂದು ಅಭಿಷೇಕ್‌ನನ್ನು ಪ್ರೀತಿಸುತ್ತಿರುವ ವಿಚಾರವನ್ನು ಪಾಲಕರಿಗೆ ತಿಳಿಸಿದ್ದೆ. ಅಂದು ತಂದೆ ತಾಯಿಯ ಭಯಕ್ಕೆ ಸುಮ್ಮನಾದೆ ಎಂದಿದ್ದಾರೆ. ಪ್ರೀತಿ ವಿಚಾರ ತಿಳಿಸಿದ ನಂತರ ನನಗೆ ಕಡಿವಾಣ ಹಾಕುವ ಪ್ರಯತ್ನ ಮಾಡಿದರು. ಯಾವುದೇ ಕಾರ್ಯಕ್ರಮ, ಶೋಗಳಿಗೂ ಕಳುಹಿಸಿ ಕೊಡಲು ನಿರಾಕರಿಸಿದರು. ನನ್ನನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಿದ್ದರಿಂದ ಅನಿವಾರ್ಯವಾಗಿ ಮನೆಯಿಂದ ಆಚೆ ಹೋಗಿ ಮದುವೆ ಆಗಿರೋದಾಗಿ ಆಡಿಯೋ ಮೂಲಕ ಉತ್ತರಿಸಿದ್ದಾರೆ ಪೃಥ್ವಿ ಭಟ್ ಹೇಳಿಕೊಂಡಿದ್ದಾರೆ.
Follow us on Social media