Breaking News

ಮೂಡಬಿದಿರೆ: ಹಿಂದೂ ಮುಖಂಡ ಶಮಿತ್ ರಾಜ್ ಧರೆಗುಡ್ಡೆ ಸಹೋದರನ ಮೇಲೆ ಹಲ್ಲೆ-ಕೊಲೆ ಯತ್ನ

ಮೂಡಬಿದಿರೆ: ಹಿಂದೂ ಸಂಘಟನೆ ಮುಖಂಡ ಶಮಿತ್ ರಾಜ್ ಧರೆಗುಡ್ಡೆ ಅವರ ಸಹೋದರ ಸಂತೋಷ್ ಅವರ ಮೇಲೆ ತಲವಾರಿನಿಂದ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧರೆಗುಡ್ಡೆ ಗ್ರಾಮದ ರಬ್ಬರ್ ತೋಟ ಎಂಬಲ್ಲಿ ಎ.5ರ ಸಂಜೆ ಘಟನೆ ನಡೆದಿದ್ದು, ಗಣೇಶ್ ಹಾಗೂ ಅಕ್ಷಿತ್ ಪ್ರಕರಣದ ಆರೋಪಿಗಳಾಗಿದ್ದಾರೆ.

ಸಂತೋಷ್ ಅವರ ಕಾಲಿಗೆ ಗಾಯವಾಗಿದ್ದು, ಅವರನ್ನು ಕಾರ್ಕಳ ಸ್ಪಂದನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೂರ್ವದ್ವೇಷವೇ ಹಲ್ಲೆಗೆ ಕಾರಣವೆನ್ನಲಾಗಿದೆ. ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ತನಿಖೆ ನಡೆಸುತ್ತಿದ್ದಾರೆ.

Follow us on Social media

About the author