ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ದೊಡ್ಡದಾಗಿ ಸುದ್ದಿ ಮಾಡಿದ ವಿಷಯ. ಮಧುಬಲೆಗೆ ಬಿದ್ದವರು ಎಷ್ಟು? ಹೇಗೆ ಎಂಬ ದೊಡ್ಡ ಚರ್ಚೆಗಳು ನಡೆದು ಹೋದವು. ಆಮೇಲೆ ನೂರಾರು ತಿರುವು ಪಡೆದುಕೊಂಡು ಕೊನೆಯಾಯ್ತು. ರಾಜಕಾರಣಿಗಳನ್ನು ಬಿಡಿ ಸಾಮಾನ್ಯರನ್ನು ಕೂಡ ಈ ಜೇನಬಲೆ ಬಿಡುತ್ತಿಲ್ಲ. ಹೆಣ್ಣಿನ ಅಧರಗಳನ್ನು ಒಂದೇ ಒಂದು ಬಾರಿ ಚುಂಬಿಸುವುದಕ್ಕಾಗಿ ಲಕ್ಷ, ಲಕ್ಷ ಹಣವನ್ನು ಕಳೆದುಕೊಂಡವನ ಕಥೆಯಿದು. ಇಂತಹದೊಂದು ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿ ನಡೆದಿದೆ.
ಬೆಂಗಳೂರಿನ ಸಿಸಿಬಿ ಪೊಲೀಸರು ಶಿಕ್ಷಕಿ ಶ್ರೀದೇವಿ, ಗಣೇಶ್ ಕಾಳೆ ಹಾಗೂ ಸಾಗರ್ ಮೊರೆ ಎಂಬ ಮೂವರನ್ನು ಈ ಪ್ರಕರಣವೊಂದರಲ್ಲಿ ಬಂಧಿಸಿದ್ದಾರೆ.
ಏನಿದು ಘಟನೆ?
ಮಹಾಲಕ್ಷ್ಮೀ ಲೇಔಟ್ನ ಶ್ರೀದೇವಿ ರೊಡಗಿ ಎಂಬ ಶಿಕ್ಷಕಿಗೆ ಮಗುವಿನ ಪೋಷಕರೊಬ್ಬರು ಪರಿಚಯವಾಗಿದ್ದರು. ಅವರೊಬ್ಬ ಉದ್ಯಮಿಯಿಂದ ಶಾಲೆ ನಿರ್ವಹಣೆಗಾಗಿ 2 ಲಕ್ಷ ಸಾಲ ಪಡೆದಿದ್ದ ಶ್ರೀದೇವಿ 2024ರಲ್ಲಿ ವಾಪಸ್ ಕೊಡುವುದಾಗಿ ಹೇಳಿದ್ದಳಂತೆ. ಹಣ ವಾಪಸ್ ಕೇಳಿದಾಗ ಶಾಲೆಯ ಪಾರ್ಟನರ್ ಆಗು ಎಂದಿದ್ದಳು. ಇದೇ ವೇಳೆ ಇಬ್ಬರ ನಡುವೆ ಸಲುಗೆ ಬೆಳೆದು ಸುತ್ತಾಟಗಳು ಆರಂಭವಾದವು. ಶ್ರೀದೇವಿಯೊಂದಿಗೆ ಮಾತನಾಡಲು ಉದ್ಯಮಿ ಹೊಸ ಸಿಮ್ ಕಾರ್ಡ್ ಕೂಡ ಖರೀದಿಸಿದ್ದ. ಜನವರಿ ಮೊದಲ ವಾರದಲ್ಲಿ ಹಣ ವಾಪಸ್ ಕೇಳಿದಾಗ ನಿನಗೇನು ಬೇಕು ಕೇಳು ಕೊಡುತ್ತೇನೆ ಎಂದ ಶ್ರೀದೇವಿ, ಉದ್ಯಮಿಗೆ ಐದು ಬಾರಿ ತುಟಿಗೆ ತುಟಿ ಬೆಸೆದು, ಮುತ್ತಿಟ್ಟು ಐವತ್ತು ಸಾವಿರ ರೂಪಾಯಿ ತೆಗೆದುಕೊಂಡು ಹೋಗಿದ್ದಳು. ಬಳಿಕ ನಿನ್ನ ಜೊತೆ ರಿಲೇಷನ್ಶಿಪ್ನಲ್ಲಿ ಇರ್ತೇನೆಂದು ಮತ್ತೆ 15 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಳು. ಪದೇ ಪದೇ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ದರಿಂದ ಸಿಮ್ ಮುರಿದು ಬಿಸಾಕಿದ್ದ ಉದ್ಯಮಿ.
ಕೊನೆಗೆ ಆತನ ಪತ್ನಿಗೆ ಕರೆ ಮಾಡಿದ ಶ್ರೀದೇವಿ. ಮಕ್ಕಳ ಸ್ಕೂಲ್ ಟಿಸಿ ಕೊಡ್ತೇನೆ ನಿಮ್ಮ ಪತಿಯನ್ನು ಕಳಿಸಿ ಎಂದಿದ್ದಳು. ಅದರಂತೆ ಶ್ರೀದೇವಿಯ ಶಾಲೆಗೆ ತೆರಳಿದ್ದ ಉದ್ಯಮಿ. ಅಂದು ಶ್ರೀದೇವಿ ಜೊತೆ ಶಾಲೆಯಲ್ಲಿ ಇತರೆ ಆರೋಪಿಗಳಾದ ಸಾಗರ್ ಮತ್ತು ಗಣೇಶ್ ಕೂಡ ಇದ್ದರು. ಸಾಗರ್ನನ್ನು ಉದ್ಯಮಿಗೆ ತೋರಿಸಿ ಆವಾಜ್ ಹಾಕಿದ್ದ ಗಣೇಶ್. ಸಾಗರ್ ಜೊತೆ ಶ್ರೀದೇವಿಯ ಎಂಗೇಜ್‌ಮೆಂಟ್ ಆಗಿದೆ, ಆದರೆ ನೀನು ಆಕೆಯೊಂದಿಗೆ ಮಜಾ ಮಾಡಿದ್ದೀಯ. ಈ ವಿಚಾರವನ್ನು ಶ್ರೀದೇವಿ ತಂದೆ ತಾಯಿಗೆ ಹಾಗೂ ನಿನ್ನ ಹೆಂಡತಿಗೆ ತಿಳಿಸುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ.
ಶ್ರೀದೇವಿಗೆ ಬಾಯ್ಫ್ರೆಂಡ್ ಇರೋ ವಿಚಾರ ತಿಳಿದಿಲ್ಲ. ಆಕೆಯ ಜೊತೆಗೆ ಊಟ ತಿಂಡಿ ಮಾಡಿದ್ದೇನಷ್ಟೇ ಎಂದು ಹೇಳಿದ್ದಾನೆ ಉದ್ಯಮಿ. ಕೊನೆಗೆ ಮೊಬೈಲ್ನಲ್ಲಿ ಮುರುಳಿ ಎಂಬಾತನ ಫೋಟೊ ತೋರಿಸಿದ ಗಣೇಶ್ ಹಾಗೂ ಸಾಗರ್ ಪೊಲೀಸ್ ಠಾಣೆಗೆ ಹೋಗೋಣ ಎಂದು ಉದ್ಯಮಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ. ಮಹಾಲಕ್ಷ್ಮೀ ಲೇಔಟ್ನ ಉದ್ಯಮಿ ಮನೆಯ ಬಳಿಯೇ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ. ಇಲ್ಲವಾದಲ್ಲಿ ನಿನ್ನ ಹೆಂಡತಿಗೆ ಈ ವಿಚಾರ ತಿಳಿಸಿ ಅವಳನ್ನು ಕರೆದೊಯ್ತೀವಿ ಎಂದು ಬ್ಲ್ಯಾಕ್ಮೇಲ್ ಮಾಡಿದ್ದಾರೆ.
ಗೊರುಗುಂಟೆಪಾಳ್ಯದ ಬಳಿ ಕಾರು ನಿಲ್ಲಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಇಪ್ಪತ್ತು ಲಕ್ಷಕ್ಕೆ ಡಿಮ್ಯಾಂಡ್ ಇಟ್ಟು, ಕೊನೆಗೆ 90 ಸಾವಿರ ರೂಪಾಯಿ ಹಣವನ್ನು ಪಡೆದು ಉದ್ಯಮಿಯನ್ನು ಬಿಟ್ಟು ಕಳುಹಿಸಿದ್ದಾರೆ. ಮಾರ್ಚ್ 17ರಂದು ಮತ್ತೆ ಉದ್ಯಮಿಗೆ ಕರೆ ಮಾಡಿದ ಶ್ರೀದೇವಿ, ಮತ್ತೆ 15 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದಾಳೆ. ಹಣ ಕೊಟ್ಟರೇ, ಅಶ್ಲೀಲ ವಿಡಿಯೋ ಚಾಟಿಂಗ್ ಡಿಲೀಟ್ ಮಾಡ್ತೀನಿ. ಇಲ್ಲವಾದರೆ ನಿನ್ನ ಪತ್ನಿಗೆ ತೋರಿಸಿ ನಿನ್ನ ಸಂಸಾರವನ್ನು ಹಾಳು ಮಾಡುತ್ತೇನೆಂದು ಬ್ಲ್ಯಾಕ್ಮೇಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.
ಉದ್ಯಮಿಯ ಕೊನೆಗೆ ಸಿಸಿಬಿಗೆ ದೂರು ನೀಡಿದ್ದಾನೆ. ಸದ್ಯ ದೂರಿನನ್ವಯ ಶ್ರೀದೇವಿ, ಅರುಣ್ ಮತ್ತು ಸಾಗರ್ ಎಂಬುವವರನ್ನು ಬಂಧಿಸಿದ್ದು ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆದಿದ್ದಾರೆ.
ವಿಚಾರಣೆಯಲ್ಲಿ ಈ ಮೂವರು ಆರೋಪಿಗಳು ಮೂಲತಃ ವಿಜಯನಗರ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಮಹಾಲಕ್ಷ್ಮೀ ಲೇಔಟ್ನಲ್ಲಿ ಶ್ರೀದೇವಿ ರೂಡಗಿ ಪ್ರಿಸ್ಕೂಲ್ ನಡೆಸುತ್ತಿದ್ದಳು ಎಂದು ತಿಳಿದು ಬಂದಿದೆ.
Follow us on Social media