Breaking News

ಹಾಸನ ಯೋಧ ಅರುಣಾಚಲ ಪ್ರದೇಶದಲ್ಲಿ ದುರ್ಮರಣ

ಹಾಸನ: ಅರುಣಾಚಲದಲ್ಲಿ ಜಿಲ್ಲೆಯ ಯೋಧರೊಬ್ಬರು ದುರ್ಮರಣಕ್ಕೀಡಾಗಿದ್ದಾರೆ.

38 ವರ್ಷದ ಹವಾಲ್ದಾರ ಮಲ್ಲೇಶ್ ಮೃತ ಯೋಧನಾಗಿದ್ದು, ಇವರು ಅರಕಲಗೂಡು ತಾಲ್ಲೂಕು ಕಸಬಾ ಹೋಬಳಿಯ ಅಥಣಿ ಸಿದ್ದಾಪುರ ಗ್ರಾಮದ ಮಂಜೇಗೌಡ ಅವರ ಮಗ.

ಮಲ್ಲೇಶ್ ಅವರ ಕರ್ತವ್ಯದ ಅವಧಿ ಕೊನೆಗೊಂಡಿದ್ದರೂ ದೇಶ ಸೇವೆ ಮಾಡುವ ಹಂಬಲದಿಂದ ಮತ್ತೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 

ಗಡಿ ಭಾಗಕ್ಕೆ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಪೆಟ್ರೋಲ್ ಬಂಕರ್ ವಾಹನದ ಮೇಲೆ ಗುಡ್ಡ ಕುಸಿದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮಲ್ಲೇಶ್ ಅವರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಲ್ಲೇಶ್ ಮತಪಟ್ಟಿದ್ದಾರೆ.

Follow us on Social media

About the author