Breaking News

ವಿಶ್ವಹಿಂದೂ ಪರಿಷದ್ ವೆಬ್ ಸೈಟ್ ಹ್ಯಾಕ್, ಕಾಶ್ಮೀರ ಪರ ಘೋಷಣೆ ಪೋಸ್ಟ್!

ನವದೆಹಲಿ: ಅತ್ಯಂತ ಪ್ರಭಾವಶಾಲಿ ಆರ್‌ಎಸ್‌ಎಸ್ ಅಂಗಸಂಸ್ಥೆ ವಿಶ್ವ ಹಿಂದೂ ಪರಿಷತ್‌ನ ವೆಬ್‌ಸೈಟ್ ಅನ್ನು ಬುಧವಾರ ಹ್ಯಾಕ್ ಮಾಡಲಾಗಿದ್ದು ಕಾಶ್ಮೀರ ಪರ ಘೋಷಣೆ ಪೋಸ್ಟ್ ಮಾಡಲಾಗಿದೆ. 

ವೆಬ್‌ಸೈಟ್ ನ ಮುಖಪುಟದಲ್ಲಿ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡಿದ್ದು, ಆಡಳಿತಾರೂಢ ಬಿಜೆಪಿಯ ವಿರುದ್ಧ ಧ್ವನಿ ಎತ್ತಿ ಎಂದು ಸ್ಪಷ್ಟ ಕರೆ ನೀಡಲಾಗಿದೆ. ಹ್ಯಾಕ್ ಮಾಡಲಾದ ವೆಬ್‌ಸೈಟ್‌ನ ಸ್ಕ್ರೀನ್‌ಶಾಟ್ ನಲ್ಲಿ ಇದು “ಕಾಶ್ಮೀರಿಗಳಿಗೆ” ಎಂದು ಬರೆಯಲಾಗಿದೆ.

ಭಾರತ ಸರ್ಕಾರವು ಕಳೆದ ವರ್ಷ 370ನೇ ವಿಧಿಯನ್ನು ರದ್ದುಗೊಳಿಸಿತು. ಈ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಸಂಯೋಜನೆಗೊಳ್ಳಲು ವಿಶೇಷ ಸ್ಥಾನಮಾನವನ್ನು ನೀಡಿತು.

ಹ್ಯಾಕ್ ಮಾಡಲಾದ ವಿಎಚ್‌ಪಿ ವೆಬ್‌ಸೈಟ್‌ನ ಮುಖಪುಟದಲ್ಲಿ ಲವ್ ಜಿಹಾದ್ ನಂತಹ ಪೋಸ್ಟ್ ಏನೂ ಇಲ್ಲ ಎಂದು ಹೇಳಿಕೊಂಡಿದೆ.

Follow us on Social media

About the author