Breaking News

ಲಾಕ್‌ಡೌನ್ ನಡುವೆ ಸಾವಯವ ಕೃಷಿ ಮಾಡಿ ಸೈ ಎನಿಸಿಕೊಂಡ ರಿಯಲ್ ಸ್ಟಾರ್

ರಿಯಲ್ ಸ್ಟಾರ್ ಅಂದಾಕ್ಷಣ ಕಣ್ಣಮುಂದೆ ಕಾಣುವ ಚಿತ್ರ ಸ್ಯಾಂಡಲ್‌ವುಡ್ ನಟ “ಉಪೆಂದ್ರ”. ಅವರದ್ದು ವಿಶಿಷ್ಟ ಮ್ಯಾನರಿಸಂ, ವಿಚಿತ್ರ ಸಂಭಾಷಣೆ, ಗೊಂದಲ ಮೂಡಿಸುವ ನಿರ್ದೇಶನದಿಂದ ಸೈ ಎನಿಸಿಕೊಂಡ ನಟ. ಈಗ ತಾನೊಬ್ಬ ಮಾದರಿ ಕಷಿಕ ಎನ್ನುವುದನ್ನೂ ತೋರಿಸಿಕೊಟ್ಟಿದ್ದಾರೆ.

ಎಲ್ಲರ ಬಾಯಲ್ಲಿ ಓಳು ಬರೀ ಓಳು ಎಂದು ಗುನಿಗುಸುವಂತೆ ಮಾಡಿದ ಉಪೇಂದ್ರ. ಹೀಗೆ‌ ನಿರ್ದೇಶನ, ನಟನೆ, ಹಾಡು, ಸಂಭಾಷಣೆಯಷ್ಟೇ ಅಲ್ಲದೇ ಕಳೆದ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷದ ಮೂಲಕ ರಾಜಕೀಯದಲ್ಲಿಯೂ ಛಾಪು ಮೂಡಿಸಲು ಪ್ರಯತ್ನಿಸಿದ್ದರು.

ಆದರೆ ಉಪೇಂದ್ರ ಅವರಿಗೆ ರಾಜಕೀಯ ಕೈಹಿಡಿಯಲಿಲ್ಲ. ಬಿಜೆಪಿಗೆ ಪರೋಕ್ಷವಾಗಿ ಬೆಂಬಲಿಸಲು ಉಪೇಂದ್ರ ರಾಜಕೀಯದಲ್ಲಿದ್ದಾರೆ ಎಂದು ಆರೋಪಿಸಲಾಗಿತ್ತು. 

ಇದೀಗ ಕೊರೋನಾವೈರಸ್ ಲಾಕ್ ಡೌನ್ ಇರುವ ಕಾರಣ ಬಿಡುವಾಗಿರುವ ನಟ ತಮ್ಮ ಜಮೀನಿನಲ್ಲಿ ವಿವಿಧ ಬಗೆಯ ಹಣ್ಣು, ತರಕಾರಿ, ಹೂವಿನ ಬೆಳೆಯನ್ನ ಹಾಕಿದ್ರು. ಅತೀ ಕಡಿಮೆ ವೆಚ್ಚದಲ್ಲಿ ಹೇಗೆ ಬೆಳೆ ಬೆಳೆಯಬೇಕು ಅಂತ ತಿಳಿಸಿಸ್ಕೊಟ್ಟಿದ್ದಾರೆ. 

Follow us on Social media

About the author