Breaking News

ಮುಲ್ಕಿ: ಪಾವಂಜೆ ರಾ.ಹೆದ್ದಾರಿಯಲ್ಲಿ ಓಮ್ನಿ -ಖಾಸಗಿ ಬಸ್ ಢಿಕ್ಕಿ- ಇಬ್ಬರ ಸಾವು, ಓರ್ವ ಗಂಭೀರ

ಮುಲ್ಕಿ : ಪಾವಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಓಮ್ನಿ -ಖಾಸಗಿ ಎಕ್ಸ್ ಪ್ರೆಸ್ ಬಸ್ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾವಂಜೆ ರಾ.ಹೆ. 66ರಲ್ಲಿ ಗುರುವಾರ ರಾತ್ರಿ ನಡೆದಿದೆ.

ಮೃತಪಟ್ಟವರನ್ನು ವಸಂತ (64), ಬುಜಂಗ (62) ಎಂದು ಗುರುತಿಸಲಾಗಿದೆ. ಕೆ. ಬಾಲಕೃಷ್ಣ ಗಂಭೀರ ಗಾಯಗೊಂಡಿದ್ದಾರೆ. ಇವರೆಲ್ಲರೂ‌ ಮುಕ್ಕದ ಪಡ್ರೆ ನಿವಾಸಿಗಳು ಎಂದು ತಿಳಿದುಬಂದಿದೆ.ಓಮ್ನಿಯಲ್ಲಿದ್ದವರು ಹಳೆಯಂಗಡಿ ಪೇಟೆ ಒಳರಸ್ತೆಯಾಗಿ ಪಾವಂಜೆ ಜಂಕ್ಷನ್ ಗೆ ಬರುತಿದ್ದು ಬಸ್ ಉಡುಪಿ ಕಡೆಗೆ ಹೋಗುತಿತ್ತು ಎನ್ನಲಾಗಿದೆ.ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು ಕಾರಿನಲ್ಲಿದ್ದ ವಸಂತ ಮತ್ತು ಬುಜಂಗ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಲಕೃಷ್ಣ ಅವರಿಗೆ ಗಂಭೀರ ಗಾಯವಾಗಿದೆ.ಗಾಯಾಳುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮಂಗಳೂರು ಉತ್ತರ ವಿಭಾಗದ ಸಂಚಾರ ಪೊಲೀಸರು ಭೇಟಿ‌ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ

Follow us on Social media

About the author