Breaking News

ಮಧ್ಯಪ್ರದೇಶ: ಮಗುಚಿ ಬಿದ್ದ ಟ್ರಕ್; 5 ವಲಸೆ ಕಾರ್ಮಿಕರು ಸಾವು, 15 ಜನರಿಗೆ ಗಾಯ

ನರ್ಸಿಂಗ್ಪುರ : ಮಧ್ಯಪ್ರದೇಶದಲ್ಲಿ ಮಾವಿನಹಣ್ಣುಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ವೊಂದು ಮಗುಚಿಬಿದ್ದ ಪರಿಣಾಮ 5 ಮಂದಿ ವಲಸೆ ಕಾರ್ಮಿಕರು ಧಾರುಣ ಸಾವನ್ನಪ್ಪಿದ್ದು, 15 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. 

ವಲಸೆ ಕಾರ್ಮಿಕರು ಹೈದರಾಬಾದ್ ನಿಂದ ಉತ್ತರಪ್ರದೇಶಕ್ಕೆ ತೆರಳುತ್ತಿದ್ದರು. ಟ್ರಕ್ ನಲ್ಲಿ ಒಟ್ಟು 20 ಮಂದಿ ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದರು. 

ಟ್ರಕ್ ಮಧ್ಯಪ್ರದೇಶದ ನರ್ಸಿಂಗ್ಪುರದತ್ತ ಬರುತ್ತಿದ್ದಂತೆಯೇ ಲಾರಿ ಮಗುಚಿ ಬಿದ್ದಿದೆ. ಪರಿಣಾಮ ಐವರು ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಎಲ್ಲರನ್ನೂ ಕೊರೋನಾ ವೈರಸ್ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ ಓರ್ವ ಕಾರ್ಮಿಕನಲ್ಲಿ ವೈರಸ್ ಲಕ್ಷಣಗಳು ಕಂಡು ಬಂದಿದೆ ಎನ್ನಲಾಗುತ್ತಿದೆ.

Source : ANI

Follow us on Social media

About the author