Breaking News

ಮಂಗಳೂರು: ದ.ಕ. ಜಿಲ್ಲೆ ಹಾಟ್ ಸ್ಪಾಟ್ ಘೋಷಣೆ-ಲಾಕ್ ಡೌನ್ ಮತ್ತಷ್ಟು ಕಠಿಣ

ಮಂಗಳೂರು : ದೇಶದೆಲ್ಲೆಡೆ ಕೊರೊನಾ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುತ್ತಿದ್ದು, ಈ ನಡುವೆ ಸೋಂಕಿತರು ಹೆಚ್ಚಿರುವ ಜಿಲ್ಲೆಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ದ.ಕ. ಜಿಲ್ಲೆ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ.

ಈ ಬಗ್ಗೆ ಕೇಂದ್ರ ಸರಕಾರ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಅದರ ಅನ್ವಯ ಈ ಎಂಟು ಜಿಲ್ಲೆಗಳಲ್ಲಿ ಲಾಕ್ ಡೌನ್ ಕಠಿಣವಾಗಿರಲಿದೆ ಎಂದು ಸರಕಾರ ತಿಳಿಸಿದೆ. ಇನ್ನು ಉಡುಪಿ ಜಿಲ್ಲೆ ಸೇರಿದಂತೆ ಹನ್ನೊಂದು ಜಿಲ್ಲೆಗಳನ್ನು ನಾನ್ ಹಾಟ್ ಸ್ಪಾಟ್ ಜಿಲ್ಲೆಗಳೆಂದು ಗುರುತಿಸಲಾಗಿದೆ.ಹಾಟ್ ಸ್ಪಾಟ್ ವಿಧಿಸಿರುವ ಜಿಲ್ಲೆಗಳು:
ದಕ್ಷಿಣ ಕನ್ನಡ
ಬೆಂಗಳೂರು ನಗರ
ಮೈಸೂರು
ಬೆಳಗಾವಿ
ಬೀದರ್
ಕಲಬುರಗಿ
ಬಾಗಲಕೋಟೆ
ಧಾರವಾಡನಾನ್ ಹಾಟ್ ಸ್ಪಾಟ್ ಜಿಲ್ಲೆಗಳು:
ಉಡುಪಿ
ಉತ್ತರ ಕನ್ನಡ
ಬಳ್ಳಾರಿ
ಮಂಡ್ಯ
ಬೆಂಗಳೂರು ಗ್ರಾಮಾಂತರ
ದಾವಣೆಗೆರೆ
ಗದಗ
ತುಮಕೂರು
ಕೊಡಗು
ವಿಜಯಪುರ
ಚಿಕ್ಕಬಳ್ಳಾಪುರಇನ್ನು ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲದ ಉಳಿದ 11 ಜಿಲ್ಲೆಗಳನ್ನು ಗ್ರೀನ್ ಜೋನ್ ಎಂದು ಘೋಷಿಸಲಾಗಿದೆ.

Follow us on Social media

About the author