Breaking News

ಬೆಳ್ಳಾರೆ : ಗಂಭೀರ ಗಾಯಗೊಂಡ ಬಿಜೆಪಿ ಯುವ ನಾಯಕ ಚಿಕಿತ್ಸೆ ಫಲಿಸದೆ ಸಾವು-ಬರ್ಬರ ಹತ್ಯೆ

ಸುಳ್ಯ : ಬಿಜೆಪಿ ಯುವ ನಾಯಕನ ಮೇಲೆ ಮಾರಣಾಂತಿ ದಾಳಿ ನಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಬೆಳ್ಳಾರೆಯಲ್ಲಿ ಇಂದು ರಾತ್ರಿ ನಡೆದಿದೆ.

ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಗಂಭೀರ ಗಾಯಗೊಂಡ ಪ್ರವೀಣ್ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಬೆಳ್ಳಾರೆ ಪೇಟೆಯಲ್ಲಿ ಈ ಘಟನೆ ನಡೆದಿದ್ದು ಬೈಕಲ್ಲಿ ಬಂದ ಅಪರಿಚಿತ ತಂಡದಿಂದ ಈ ಕೃತ್ಯ ನಡೆದಿದ್ದು , ಕೇರಳ ನೊಂದಣಿ ಸಂಖ್ಯೆ ಹೊಂದಿದ್ದ ಬೈಕ್ ಎನ್ನುವ ಶಂಕೆ ವ್ಯಕ್ತವಾಗಿದೆ.

ಬೆಳ್ಳಾರೆಯಲ್ಲಿ ವಾರದ ಹಿಂದ ನಡೆದ ಕೇರಳ ಮೂಲದ ಮಸೂದ್ ಕೊಲೆಗೆ ರಿವೇಂಜ್ ಆಗಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಸಾಮಾಜಿಕ ಕ್ಷೇತ್ರ, ರಾಜಕೀಯ ಕ್ಷೇತ್ರದಲ್ಲಿ  ಪ್ರವೀಣ್ ನೆಟ್ಟಾರು  ಸಕ್ರೀಯವಾಗಿದ್ದರು.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿದ್ದು ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ.

Follow us on Social media

About the author