Breaking News

ಬೆಳಗಾವಿ : 100 ಕೆಜಿ ಕೇಕ್ ಕಟ್ ಮಾಡಿ ತನ್ನ ನೆಚ್ಚಿನ ನಾಯಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಶಿವಪ್ಪ!

ಬೆಳಗಾವಿ: ಇತ್ತೀಚಿಗಷ್ಟೇ ತೆರೆಕಂಡ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಚಿತ್ರ ನೋಡಿದ ನಂತರ ನಾಯಿಗಳ ಮೇಲಿನ ಪ್ರೀತಿ ಹೆಚ್ಚಾಗುತ್ತಿದ್ದು, ಬೆಳಗಾವಿಯ ವ್ಯಕ್ತಿಯೊಬ್ಬರು ತಮ್ಮ ಮುದ್ದಿನ ನಾಯಿ ಕ್ರಿಶ್‌ನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.ಇತ್ತೀಚೆಗೆ ಬೆಳಗಾವಿಯ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿಯ ಗ್ರಾಮ ಪಂಚಾಯ್ತಿ ಸದಸ್ಯ ಶಿವಪ್ಪ ಯಲ್ಲಪ್ಪ ಮರಡಿ ಅವರು ತಮ್ಮ ನಾಯಿಯ ಹುಟುಹಬ್ಬದ ಭರ್ಜರಿ ಪಾರ್ಟಿ ನೀಡಿದ್ದಾರೆ. ಬ್ಯಾಷ್‌ನ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ, ಅದರಲ್ಲಿ ಅವರು ತಮ್ಮ ನಾಯಿಯೊಂದಿಗೆ 100 ಕೆಜಿ ಕೇಕ್ ಕತ್ತರಿಸುತ್ತಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಸುಮಾರು 4000 ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು.

ನಾಯಿಯ ಜನ್ಮದಿನಕ್ಕೆ 100 ಕೆಜಿ ತೂಕದ ಕೇಕ್‌ ಕತ್ತರಿಸಿದ್ದಾರೆ. ಅಲ್ಲದೇ ಗ್ರಾಮದ 5 ಸಾವಿರ ಮಂದಿಗೆ ಊಟ ಹಾಕಿಸಿದ್ದಾರೆ. 3 ಕ್ವಿಂಟಾಲ್ ಚಿಕನ್, 1 ಕ್ವಿಂಟಾಲ್ ಮೊಟ್ಟೆ, ಸಸ್ಯಾಹಾರಿಗಳಿಗೆ 50 ಕೆಜಿ ಕಾಜೂ ಕರಿ ಊಟ ಹಾಕಿಸಿದ್ದಾರೆ.

ಕೇಕ್ ಕತ್ತರಿಸಿದ ನಂತರ ನಾಯಿಗೆ ಗ್ರಾಮದಲ್ಲಿ ವಾದ್ಯಗಳ ಮೂಲಕ ಅದ್ಧೂರಿಯಾಗಿ ಮೆರವಣಿಗೆಯನ್ನು ಸಹ ಮಾಡಿಸಲಾಗಿದೆ. ಈ ವೇಳೆ ಊರಿನ ಜನರೆಲ್ಲ ಭಾಗಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.

Follow us on Social media

About the author