ಬೆಂಗಳೂರು: ಮದ್ಯದ ಪಾರ್ಟಿ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಿನ್ನೆ ತಡರಾತ್ರಿ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ.
ಸಿಂಗಸಂದ್ರದ ಯೋಗೇಶ್(28) ಕೊಲೆಯಾದ ಯುವಕ ಕೊಲೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.
ಪರಪ್ಪನ ಅಗ್ರಹಾರದ ಜೆಎಸ್‍ಎಸ್ ಲೇಔಟ್‍ನ ಬಯಲು ಪ್ರದೇಶದಲ್ಲಿ ನಿನ್ನೆ ರಾತ್ರಿ 8.30ರ ಸಮಯದಲ್ಲಿ ಯೋಗೇಶ್ ಮತ್ತು ಸ್ನೇಹಿತರು ಮದ್ಯದ ಪಾರ್ಟಿ ಮಾಡಿದ್ದಾರೆ.
ಪಾರ್ಟಿ ಸಂದರ್ಭದಲ್ಲಿ ಮದ್ಯ ಸಾಕಾಗದ ಕಾರಣ ಯೋಗೇಶನೇ ಸ್ನೇಹಿತನಿಗೆ ಮದ್ಯ ತರುವಂತೆ ಹಣ ಕೊಟ್ಟು ಕಳುಹಿಸಿದ್ದಾನೆ. ಈ ವೇಳೆ ಸ್ನೇಹಿತ ಮದ್ಯದ ಜತೆಗೆ ಕಬಾಬ್ ಹಾಗೂ ಮಚ್ಚನ್ನು ತಂದಿದ್ದಾನೆ. ಮದ್ಯದ ಅಮಲು ಹೆಚ್ಚಾಗುತ್ತಿದ್ದಂತೆ ಕ್ಷುಲಕ ಕಾರಣಕ್ಕೆ ಜಗಳ ಉಂಟಾಗಿ ಆಕ್ರೋಶ ಗೊಂಡ ಸ್ನೇಹಿತರು ಯೋಗೇಶನನ್ನು ಮನ ಬಂದಂತೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
Follow us on Social media