Breaking News

‘ಜೆಡಿಎಸ್‌‌ನಲ್ಲಿ ಎಂಎಲ್ಸಿ ಆಗಬೇಕಂದ್ರೆ ಒಬ್ಬೊಬ್ಬ ಎಂಎಲ್‌ಎಗಳಿಗೆ 50 ಲಕ್ಷ ಕೊಡಬೇಕು’ – ಶ್ರೀನಿವಾಸ ಗೌಡ ಹೊಸ ಬಾಂಬ್

ಕೋಲಾರ : ಜೆಡಿಎಸ್‌ ಪಕ್ಷದಲ್ಲಿ ಎಂಎಲ್‌ಸಿ ಆಗಬೇಕು ಅಂದ್ರೇ, ಒಬ್ಬೊಬ್ಬ ಶಾಸಕರಿಗೂ ತಲಾ 50 ಲಕ್ಷ ನೀಡಬೇಕು ಎಂಬುದಾಗಿ ಕೋಲಾರ ಶಾಸಕ ಕೆ.ಶ್ರೀನಿವಾಸ್ ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಹಣದ ಹೊಳೆಯನ್ನು ಹರಿಸಲಾಗಿದ್ದು, ಜೆಡಿಎಸ್ ನ ಪ್ರತಿಯೊಬ್ಬ ಶಾಸಕರಿಗೆ ತಲಾ 50 ಲಕ್ಷವನ್ನು ನೀಡಲಾಗಿದೆ ಎಂದರು.ಇನ್ನು ಪರಿಷತ್ ಚುನಾವಣೆ ಸಂದರ್ಭದಲ್ಲಿ ನನಗೂ 50 ಲಕ್ಷ ಹಣ ನೀಡೋದಕ್ಕೆ ಬಂದಿದ್ದರು. ಆದ್ರೇ.. ನಾನು ತಗೊಂಡಿಲ್ಲ. ಪ್ರತಿಯೊಬ್ಬರಿಗೂ 50 ಲಕ್ಷ ಹಂಚಿದ್ದಂತೂ ನಿಜ ಎಂಬುದಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.

ಜೆಡಿಎಸ್ ನ ಗೋವಿಂದರಾಜು ಎಂ ಎಲ್ ಸಿ ಆಗುವಾಗ ಒಬ್ಬಬ್ಬರಿಗೆ 50 ಲಕ್ಷ ಹಣ ನೀಡಿದ್ದಾರೆ. ನನಗೂ ಕೊಡೋದಕ್ಕೆ ಬಂದಿದ್ದರು ತಗೊಂಡಿಲ್ಲ. ಆದ್ರೇ.. ಒಬ್ಬೊಬ್ಬ ಎಂಎಲ್‌ಎಗಳಿಗೆ 50 ಲಕ್ಷ ರೂಪಾಯಿ ನೀಡಿದ್ದಾರೆ. ಆದ್ರೇ ನನ್ನ ಒಬ್ಬನನ್ನು ಬಿಟ್ಟು ಎಲ್ಲರಿಗೂ ಕೊಟ್ಟಿದ್ದಾರೆ ಎಂದರು.

Follow us on Social media

About the author