ಬೆಂಗಳೂರು : ಕೊರೋನಾ ವೈರಾಣು ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ಕೋವಿಡ್19 ಎಂಬ ವೈರಾಣು ವಿಶ್ವದೆಲ್ಲೆಡೆ ಹರಡುತ್ತಿರುವ ಸಾಂಕ್ರಾಮಿಕ ರೋಗದಿಂದ ಗಣನೀಯ ಪ್ರಮಾಣದಲ್ಲಿ ಜನರು ಸಾವಿಗೀಡಾಗುತ್ತಿದ್ದು, ಈ ಸಾಂಕ್ರಾಮಿಕ ರೋಗವು ಕರ್ನಾಟಕ ರಾಜ್ಯದಲ್ಲೂ ಕಂಡುಬಂದಿದೆ. ಈ ರೋಗವನ್ನು ತಡೆಗಟ್ಟಲು ಸರ್ಕಾರವು ಯುದ್ಧೋಪಾದಿಯಲ್ಲಿ ಕ್ರಮಕೈಗೊಳ್ಳುತ್ತಿದ್ದು, ಈವೈರಾಣು ಹರಡುವುದನ್ನು ನಿಯಂತ್ರಿಸಲು ಮಹತ್ವದ ನಿರ್ಧಾರಗಳನ್ನು ಕೈಗೊಂಡಿರುತ್ತದೆ. ಈ ರೋಗದಿಂದ ಬಳಲುತ್ತಿರುವ ಸಾರ್ವಜನಿಕರಿಗೆ ವೈದ್ಯೋಪಚಾರಗಳನ್ನು ಸರ್ಕಾರದ ವತಿಯಿಂದ ಮಾಡಿಸಲಾಗುತ್ತಿದ್ದು, ರೋಗವನ್ನು ಪತ್ತೆ ಹಚ್ಚಲು ಹೆಚ್ಚಿನ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿರುತ್ತದೆ. ಈ ಎಲ್ಲಾ ಸರ್ಕಾರದ ಕಾರ್ಯತಂತ್ರಗಳನ್ನು ಮನಗಂಡು ಈ ವೈರಾಣು ಹರಡುವುದನ್ನು ತಡೆಗಟ್ಟಲು ತಾವು ಸರ್ಕಾರದೊಂದಿಗೆ ಕೈಜೋಡಿಸಬೇಕೆಂದು ಹಾಗೂ ಕಾಲ ಕಾಲಕ್ಕೆ ಸರ್ಕಾರದ ವತಿಯಿಂದ ನೀಡಲಾಗುವ ಸೂಚನೆಗಳನ್ನು ಪಾಲಿಸಬೇಕೆಂದು ವಿನಂತಿಸಿದೆ. ಈ ಕಾರ್ಯಕ್ಕಾಗಿ ದೇಣಿಗೆ ಸಲ್ಲಿಸಲು ಇಚ್ಛಿಸಲು ದಾನಿಗಳು ಈ ಕೆಳಗಿನ ಅಧಿಕೃತ ಬ್ಯಾಂಕ್ ಖಾತೆಗೆ ದೇಣಿಗೆಯನ್ನು ಸಲ್ಲಿಸಬಹುದು. ಈ ಖಾತೆಗೆ ಧನಾದೇಶ/ಬೇಡಿಕೆ ಹುಂಡಿ/ ವಿದ್ಯುನ್ಮಾನ ಮೂಲಕ ದೇಣಿಗೆ ಸಲ್ಲಿಸಬಹುದು.
ಖಾತೆಯ ಹೆಸರು: Chief Minister Relief Fund Covid-19
ಬ್ಯಾಂಕ್ ಹೆಸರು: SBI (State Bank oF India)
ಶಾಖೆ: Vidhana soudha Branch
ಖಾತೆ ಸಂಖ್ಯೆ; 39234923151, ಐಎಫ್‌ಎಸ್‌ಸಿ ಕೋಡ್: SBIN0040277, ಎಂಐಸಿಆರ್ ಸಂಖ್ಯೆ 560002419, ಚೆಕ್, ಡಿಡಿ ಕಳುಹಿಸಬೇಕಾದ ವಿಳಾಸ: ನಂ.235-ಎ, 2ನೆ ಮಹಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು-560001
ಈ ರೀತಿ ಸಲ್ಲಿಸುವ ದೇಣಿಗೆಗೆ, ಆದಾಯ ತೆರಿಗೆ ಕಾಯ್ದೆ 80 ಜಿ(2)ರಡಿ ತೆರಿಗೆ ವಿನಾಯಿತಿ ಇದೆ. ಆದಾಯ ತೆರಿಗೆ ವಿನಾಯಿತಿ ಪಡೆಯಲು PAN NO.AAAGC1692P ಅಥವಾ GGGGG0000G ಅನ್ನು ಬಳಸಬಹುದು ಎಂದು ಮುಖ್ಯಮಂತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
