Breaking News

ಕೊರೋನಾ ಮಾಹಾಮಾರಿ ಎಫೆಕ್ಟ್; ಫ್ಲಿಪ್ ಕಾರ್ಟ್ ಸೇವೆಗಳು ತಾತ್ಕಾಲಿಕ ಸ್ಥಗಿತ

ಬೆಂಗಳೂರು : ಈ ಕುರಿತು ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸಿರುವ  ಫ್ಲಿಪ್ ಕಾರ್ಟ್, ತಾತ್ಕಾಲಿಕವಾಗಿ ಸೇವೆಯನ್ನು ರದ್ದುಗೊಳಿಸಿದ್ದು, ಶೀಘ್ರದಲ್ಲೇ ಸೇವೆಗೆ ಮರಳಲಿದ್ದೇವೆ ಎಂದು ಭರವಸೆ ನೀಡಿದೆ.

ಸೋಂಕು ತಡೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಹಿನ್ನೆಲೆಯಲ್ಲಿ, ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದ್ದರು.

ದೇಶದಲ್ಲಿ ಈಗಾಗಲೇ 600ಕ್ಕೂ ಹೆಚ್ಚು ಜನರಲ್ಲಿ ಸೋಂಕು ತಗುಲಿದ್ದು, 10 ಜನರು ಮೃತಪಟ್ಟಿದ್ದಾರೆ.

Follow us on Social media

About the author