Breaking News

ಕೊರೋನಾ : ದೇಶದಲ್ಲಿ ಒಂದೇ ದಿನ 56,282 ಕೇಸ್ ಪತ್ತೆ, 20 ಲಕ್ಷ ಸನಿಹದತ್ತ ಸೋಂಕು, 40,000 ದಾಟಿದ ಸಾವಿನ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೋನಾ ರೌದ್ರನರ್ತನ ಮುಂದುವರೆದಿದ್ದು, ಒಂದೇ ದಿನ ಬರೋಬ್ಬರಿ 56,282 ಮಂದಿಯಲ್ಲಿ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19,64,537ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.
 
ಈ ನಡುವೆ ಕಳೆದ 24 ಗಂಟೆಗಳಲ್ಲಿ 904 ಮಂದಿ ಸಾವನ್ನಪ್ಪಿದ್ದು, ದೇಶದಲ್ಲಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 40,699ಕ್ಕೆ ತಲುಪಿದೆ ಎಂದು ತಿಳಿದುಬಂದಿದೆ. 

ಇನ್ನು 19,64,537 ಮಂದಿ ಸೋಂಕಿತರ ಪೈಕಿ 13,28,337 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ದೇಶದಲ್ಲಿನ್ನೂ 5,95,501 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. 

ಈ ಪೈಕಿ ಮಹಾರಾಷ್ಟ್ರದಲ್ಲಿ 10,309 ಮಂದಿಗೆ ಸೋಂಕು ತಟ್ಟಿದ್ದು, ಅಲ್ಲಿ ಸೋಂಕಿತರ ಸಂಖ್ಯೆ 4.68 ಲಕ್ಷಕ್ಕೇರಿದೆ. ಇದೇ ವೇಳೆ ಆಂಧ್ರಪ್ರದೇಶದಲ್ಲಿ 10,128, ಕರ್ನಾಟಕದಲ್ಲಿ 5,619, ತಮಿಳುನಾಡಿನಲ್ಲಿ 5,175 ಹಾಗೂ ಉತ್ತರಪ್ರದೇಶದಲ್ಲಿ 4,078 ಪ್ರಕರಣಗಳು ಬೆಳಕಿಗೆ ಬಂದಿವೆ. ಬುಧವಾರ ದೇಶದಲ್ಲಿ 902 ಮಂದಿ ಬಲಿಯಾಗಿದ್ದಾರೆ. 

Follow us on Social media

About the author