Breaking News

ಕರ್ನಾಟಕಕ್ಕೆ ಕೊರೋನಾಘಾತ: ಇಂದು 2 ಸಾವು, 34 ಸೋಂಕು ಪತ್ತೆ, ಸೋಂಕಿತರ ಸಂಖ್ಯೆ 959ಕ್ಕೆ ಏರಿಕೆ!

ಬೆಂಗಳೂರು : ಕೊರೋನಾ ಸೋಂಕು ಕರ್ನಾಟಕವನ್ನು ದಿನೇ ದಿನೇ ನಲುಗಿಸುತ್ತಿದ್ದು ಕಳೆದ 24 ಗಂಟೆಯಲ್ಲಿ ಇಬ್ಬರು ಕೊರೋನಾಗೆ ಬಲಿಯಾಗಿದ್ದಾರೆ. ಹೊಸದಾಗಿ 34 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಸೋಂಕಿತರ ಸಂಖ್ಯೆ 595ಕ್ಕೆ ಏರಿಕೆಯಾಗಿದೆ.

ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 959ಕ್ಕೆ ತಲುಪಿದ್ದು, 33 ಜನರು ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 451 ಮಂದಿ ಗುಣಮುಖರಾಗಿದ್ದಾರೆ.

ಬೀದರ್ 12, ಕಲಬುರಗಿಯಲ್ಲಿ 8, ಹಾಸನ 4, ಬೆಂಗಳೂರು ನಗರ 2, ಉತ್ತರ ಕನ್ನಡ 2, ದಾವಣಗೆರೆ 2, ವಿಜಯಪುರ 2, ದಕ್ಷಿಣ ಕನ್ನಡ 1, ಬಳ್ಳಾರಿಯಲ್ಲಿ 1 ಪ್ರಕರಣಗಳು ವರದಿಯಾಗಿವೆ. 

ಇನ್ನು ಇಂದು ಕಲಬುರಗಿಯಲ್ಲಿ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ ಒಬ್ಬರು ಕೊರೋನಾಗೆ ಬಲಿಯಾಗಿದ್ದಾರೆ.

Follow us on Social media

About the author