Breaking News

ಎನ್‌ಆರ್‌ಸಿ ವಿರೋಧಿಸಿ 18 ಲಕ್ಷ ಜನರು ಗೃಹಬಂಧನದಲ್ಲಿ: ಐವನ್ ಡಿಸೋಜಾ

ಬೆಂಗಳೂರು : ವಿಧಾನ ಪರಿಷತ್‌ನಲ್ಲಿ ಸಂವಿಧಾನದ ಮೇಲೆ ಚರ್ಚೆ ಆರಂಭಿಸಿದ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ, ಎನ್ ಆರ್ ಸಿ ವಿರೋಧಿಸಿದ ಹದಿನೆಂಟು ಲಕ್ಷ ಜನರನ್ನು ಬಿಜೆಪಿ ಸರ್ಕಾರ ಗೃಹಬಂಧನದಲ್ಲಿಟ್ಟಿದೆ ಎಂದು ಆರೋಪಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಚಿವ ಸಿ.ಟಿ.ರವಿ‌, ರಾಜೀವ್ ಗಾಂಧಿ‌ ಪ್ರಧಾನಿಯಾಗಿದ್ದಾಗಲೇ ಎನ್.ಆರ್.ಸಿಗೆ ಒಪ್ಪಿಗೆ ಪಡೆಯಲಾಗಿತ್ತು. ಈಗ ಗೋಸುಂಬೆಗಳ ಬಣ್ಣ ಬದಲಾಗಿದೆ ಎಂದು ಕಾಂಗ್ರೆಸ್‌ನ್ನು ಟೀಕಿಸಿದರು.
ಆಗ ಬಿಜೆಪಿಯ ರವಿಕುಮಾರ್ , ಗೃಹಬಂಧನದಲ್ಲಿರುವವರ ಒಂದಾದರೂ‌ ಹೆಸರು ಹೇಳಲಿ. ನಾನು ರಾಜೀನಾಮೆ ನೀಡುತ್ತೇನೆ. ಹೆಸರು ಹೇಳಲಾಗದಿದ್ದರೆ ನೀವು ರಾಜೀನಾಮೆ ಕೊಡುತ್ತೀರಾ ಎಂದು ಐವಾನ್‌ಗೆ ಸವಾಲೆಸೆದರು.

Follow us on Social media

About the author