Breaking News

ಉಡುಪಿ: ಚಾಲಕ ನಿದ್ರೆಗೆ ಜಾರಿದ್ದಾಗ ಲಾರಿ ಟಯರ್‌ನ್ನೇ ಎಗರಿಸಿದ ಕಳ್ಳರ ಬಂಧನ

ಉಡುಪಿ: ಶಿರೂರು ಟೋಲ್‌ಗೇಟ್ ಬಳಿ ನಿಂತಿದ್ದ ಲಾರಿಯಿಂದ ಟಯರ್ ಕದ್ದೊಯ್ದ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

ಮಹಾರಾಷ್ಟ್ರ ಮೂಲದ ಶ್ಯಾಮ ಶಂಕರ್ (24) ಆಕಾಶ್ ಬಪ್ಪ ಶಿಂಧೆ (19) ಹಾಗೂ ಅಮೂಲ್ ರಾಮ ಕಳೆ (22) ಬಂಧಿತರು.

ಗುರುವಾರ ರಾತ್ರಿ ಟೋಲ್‌ಗೇಟ್ ಸಮೀಪ ಮಂಗಳೂರಿಗೆ ತೆರಳುತ್ತಿದ್ದ ಅಂಕೋಲಾ ಮೂಲದ ಲಾರಿ ಚಾಲಕ ನಿದ್ರೆ ಮಾಡಲು ಎಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ.

ಲಾರಿಯಿಂದ 1.85 ಲಕ್ಷ. ರೂ ಮೌಲ್ಯದ ಒಟ್ಟು 5 ಟಯರ್‌ಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದರು.ಪ್ರಕರಣವನ್ನು ಬೆನ್ನಟ್ಟಿದ್ದ ಬೈಂದೂರು ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಟಿಟಿ ದೃಶ್ಯಾವಳಿ ಮೂಲಕ ಪತ್ತೆ ಹಚ್ಚಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಬೈಂದೂರು ತಾಲೂಕಿನ ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ 66 ಬಳಿ ಇವರನ್ನು ಬಂಧಿಸಲಾಗಿದೆ.

Follow us on Social media

About the author