Breaking News

ಉಡುಪಿ: ಸಿಡಿಲು ಬಡಿದು ಯುವಕನ ಮೃತ್ಯು

ಉಡುಪಿ : ಭಾನುವಾರ ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯಲ್ಲೂ ಭಾರೀ ಗುಡುಗು ಸಹಿತ ಮಳೆಯಾಗಿದ್ದು, ಪರಿಣಾಮ ಸಿಡಿಲು ಬಡಿದು ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.

ಕಾಪು ತಾಲೂಕಿನ ಕಟಪಾಡಿ ಏಣಗುಡ್ಡೆಯಲ್ಲಿ ಈ ಘಟನೆ ನಡೆದಿದ್ದು, ಕಟಪಾಡಿ ಏಣಗುಡ್ಡೆ ನಿವಾಸಿ ಭರತ್ (22) ಮೃತ ಯುವಕ.

ಮೃತ ಭರತ್ ಸಿಡಿಲು ಸಹಿತ ಮಳೆ ಬರುವಾಗ ಮನೆಯಲ್ಲಿ ಕುಳಿತಿದ್ದನು. ಆದರೂ ಸಿಡಿಲು ಬಡಿದು ಯುವಕ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನ ಮನೆಯವರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಭರತ್ ಕೊನೆಯುಸಿರೆಳೆದಿದ್ದಾರೆ.

ಮಾಹಿತಿ ತಿಳಿದು ಜಿಲ್ಲೆಯ ಕಾಪು ತಾಲೂಕಿನ ಪೊಲೀಸ್ ಠಾಣಾಧಿಕಾರಿ ರಾಜ್‍ಶೇಖರ್ ಸಾಗನೂರ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

Follow us on Social media

About the author