ಉಡುಪಿ :ಉಡುಪಿ ನಗರದಲ್ಲಿ ಡಬ್ಬಲ್ ಶರ್ಟ್ ಹಾಕೊಂಡು ಮೋಟಾರು ಕಾಯ್ದೆ ಉಲ್ಲಂಘಿಸುವವರನ್ನು ಟ್ರಾಫಿಕ್ ಪೊಲೀಸರು ಟಾರ್ಗೆಟ್ ಮಾಡಿದ್ದಾರೆ. ರಿಕ್ಷಾದಿಂದ ಇಳಿಸಿ ಬಟಲ್ ಹಾಕಿಸಿ ಪೊಲೀಸರು ಪಾಠ ಹೇಳಿ ಕಳುಹಿಸ್ತಿದ್ದಾರೆ. ಉಡುಪಿ ನಗರದ ಎಲ್ಲಾ ಜಂಕ್ಷನ್ ನಲ್ಲಿ ಪೊಲೀಸರು ಎರಡೆರಡು ಶರ್ಟ್ ಹಾಕಿಕೊಂಡು ಬಾಡಿಗೆ ಮಾಡುವವರಿಗೆ ವಾರ್ನಿಂಗ್ ಕೊಡ್ತಾಯಿದ್ದಾರೆ ಹಾಗೂ ಫೈನ್ ಹಾಕುವ ಎಚ್ಚರಿಕೆ ಕೊಡ್ತಾಯಿದ್ದಾರೆ. ಆಟೋ ದಿಂದ ಇಳಿಸಿ ಖಾಕಿ ಶರ್ಟ್ ನೀಟಾಗಿ ಹಾಕುವಂತೆ ತಾಕೀತು ಮಾಡುತ್ತಿದ್ದಾರೆ. ಎಸ್ ಐ ಅಬ್ದುಲ್ ಖಾದರ್ ರಸ್ತೆಗಿಳಿದು ಕಾರ್ಯಾಚರಣೆ ನಡೆಸಿದ್ದಾರೆ. ಡಬ್ಬಲ್ ಶರ್ಟ್ ರೌಡಿಗಳು, ಭಿಕ್ಷುಕರು ಹಾಕುತ್ತಾರೆ ನಿಮಗೆ ಗೌರವ ಇದೆ, ನಿಮ್ಮದು ಸೇವೆ ನೀಟಾಗಿ ಇರಿ ಅಂತ ಎಸ್ ಐ ಕಿವಿ ಮಾತು ಹೇಳಿದ್ದಾರೆ.
Follow us on Social media