ವಾಷಿಂಗ್ಟನ್: ಕೊರೋನಾ ಸೋಂಕು ತಡೆಯುವಲ್ಲಿ, ಪರೀಕ್ಷೆ ಮಾಡುವಲ್ಲಿ ಯಾರು ಮೊದಲು? ಯಾರು ಎರಡನೆಯವರು..??
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಾರ ಸೋಂಕು ಪತ್ತೆ ಪರೀಕ್ಷೆಯಲ್ಲಿ ಜಗತ್ತಿನಲ್ಲಿಯೇ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ಭಾರತವಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಕೋವಿಡ್ ಪರೀಕ್ಷೆಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಈವರೆಗೆ 5 ಕೋಟಿ ಜನರ ಪರೀಕ್ಷೆಗಳನ್ನು ಮಾಡಲಾಗಿದೆ ಅದೆ ರೀತಿ , ಭಾರತದಲ್ಲಿ 1.20 ಕೋಟಿ ಪರೀಕ್ಷೆಗಳನ್ನು ನಡೆಸುವ ಮೂಲಕ ವಿಶ್ವದಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದೂ ಟ್ರಂಪ್ ಹೇಳಿದ್ದಾರೆ.
ಅಮೆರಿಕವು ಲಸಿಕೆಯನ್ನು ಅಭಿವೃದ್ಧಿಪಡಿಸಿ, ಕೊರೊನಾವನ್ನು ಓಡಿಸಲಿದೆ ಎಂದು ಕೊರನಾದಿಂದ ಮೃತಪಟ್ಟ ಪ್ರತಿಯೊಬ್ಬರ ಗೌರವಾರ್ಥವಾಗಿ ನಾವು ಪ್ರತಿಜ್ಞೆ ಮಾಡುತ್ತೇವೆ. ನಾವು ಜನರು ನಿರೀಕ್ಷೆ ಮಾಡಿರುವುದಕ್ಕಿಂತ ಮೊದಲೇ ಕೊರೊನಾಗೆ ಲಸಿಕೆ ಬಿಡುಗಡೆ ಮಾಡುವುದಾಗಿ ಟ್ರಂಪ್ ಬಹಳ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Follow us on Social media