Breaking News

ಕಾರ್ಕಳ: ಪತ್ತೊಂಜಿಕಟ್ಟೆ ಪೊಲ್ಲಾರು  ಸೇತುವೆ ಬಳಿ ಪತ್ತೆಯಾದ ನವಜಾತ ಶಿಶು ಸಾವು 

ಕಾರ್ಕಳ: ಕಾರ್ಕಳ ನಗರದ ಹೊರವಲಯದ ಪತ್ತೊಂಜಿಕಟ್ಟೆ ಪೊಲ್ಲಾರು ಎಂಬಲ್ಲಿ ಕಿರುಸೇತುವೆ ಬಳಿ ಜೂ 21 ರಂದು ಸಂಜೆ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಸೇತುವೆ ಪಕ್ಕದಲ್ಲಿರುವ ಮನೆಯವರಿಗೆ ಮಗು ಅಳುವ ಶಬ್ದ ಕೇಳಿ ಬಂದ ಹಿನ್ನಲೆಯಲ್ಲಿ ಶಬ್ದ ಎಲ್ಲಿಂದ ಕೇಳಿ ಬರುತ್ತಿದೆ ಎಂದು ಶೋಧ ನಡೆಸಿದಾಗ ಕಿರು ಸೇತುವೆ ಕೆಳಭಾಗದಲ್ಲಿ ಮಗು ಇರುವುದು ಕಂಡುಬಂದಿದೆ. ಪೊಲೀಸರಿಗೆ ಮಾಹಿತಿ ನೀಡಿ ಅವರು ವಿಚಾರಣೆ ನಡೆಸಿ ಅಂಬ್ಯುಲೆನ್ಸ್ ಮೂಲಕ ಮಗುವನ್ನು ಠಾಣೆಗೆ ಕರೆತಂದಿದ್ದಾರೆ.

ಆದಾಗಲೇ ಮಗು ಉಸಿರು ನಿಲ್ಲಿಸಿತ್ತು. ಮಳೆಯಿಂದಾಗಿ ಮಗು ಪ್ರಾಣ ಬಿಟ್ಟಿರಬಹುದು ಎನ್ನಲಾಗಿದೆ. ನವಜಾತ ಶಿಶುವನ್ನು ಸೇತುವೆ ಪಕ್ಕ ಬಿಸಾಕಿ ಹೋಗಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

Follow us on Social media

About the author